[{"data":1,"prerenderedAt":825},["ShallowReactive",2],{"story-pore-kalachidaga":3,"summary-all":354},{"id":4,"title":5,"author":6,"body":7,"cover":16,"date":344,"description":345,"download":344,"extension":346,"meta":347,"navigation":348,"path":349,"seo":350,"slug":351,"stem":352,"__hash__":353},"stories\u002Fstories\u002Fpore-kalachidaga.md","ಪೊರೆ ಕಳಚಿದಾಗ","Arun Hegde",{"type":8,"value":9,"toc":341},"minimark",[10,17,21,27,30,33,36,39,42,45,48,51,54,57,63,66,69,72,75,78,81,84,87,90,93,96,99,104,107,110,113,116,119,122,125,128,131,134,137,140,145,148,151,154,157,160,163,166,169,172,175,178,181,184,187,190,193,196,199,202,205,208,211,214,217,220,223,226,229,232,235,238,241,244,247,250,253,258,261,264,267,270,273,276,279,282,285,288,291,294,297,300,303,306,309,312,315,318,321,324,327,330,333,336],[11,12,13],"p",{},[14,15],"img",{"alt":5,"src":16},"\u002Fstories\u002Fpore-kalachidaga\u002Fimage1.png",[18,19,5],"h1",{"id":20},"ಪೊರೆ-ಕಳಚಿದಾಗ",[11,22,23],{},[24,25,26],"strong",{},"(ಅನುವಾದಿತ ಕಥೆ)",[11,28,29],{},"ಪೆಟ್ರೋಮ್ಯಾಕ್ಸ್ ಲೈಟಿನ ಬುಸುಬುಸು ಸದ್ದಿನೊಂದಿಗೆ, ಸಾಗರದ ಆ ಫಾರೆಸ್ಟ್ ರೆಸ್ಟ್‌ಹೌಸ್‌ನಲ್ಲಿ ನಮ್ಮ ರಾತ್ರಿಯ ಊಟ ನಡೆದಿತ್ತು. ಮಲೆನಾಡಿನ ಚಳಿಗೆ ಬಿಸಿ ಬಿಸಿ ಅಕ್ಕಿ ರೊಟ್ಟಿಯನ್ನು ಮುರಿದು, ಬದನೆಕಾಯಿ ಗೊಜ್ಜಿಗೆ ಅದ್ದಿ ತಿನ್ನುತ್ತಿದ್ದಾಗ, ಈ ಅರಣ್ಯ ಇಲಾಖೆಯ ವಸತಿಗೃಹದ ಅಡುಗೆಯವನೂ, ಉಸ್ತುವಾರಿಯೂ ಆಗಿದ್ದ ಲಕ್ಷ್ಮಣ ಮೆಲ್ಲನೆ ಮಾತು ತೆಗೆದ, \"ನೀವು ಹುಣಸೆಕಟ್ಟೆ ಅಜ್ಜನ ದರ್ಶನಕ್ಕೆ ಹೋಗೋದಿಲ್ವಾ, ಸಾ'ಬ್ರೆ?\"",[11,31,32],{},"ಆ 'ಹುಣಸೆಕಟ್ಟೆ ಅಜ್ಜ' ಯಾರೆಂದೇ ನಮಗೆ ಗೊತ್ತಿಲ್ಲದ ಮೇಲೆ, ದರ್ಶನದ ಪ್ರಶ್ನೆ ಎಲ್ಲಿಂದ ಬರಬೇಕು?",[11,34,35],{},"ಅದನ್ನೇ ಅವನಿಗೆ ಹೇಳಿದೆ.",[11,37,38],{},"\"ನಮ್ಮ ಜೀಪ್ ಡ್ರೈವರ್ ರಾಮಣ್ಣನಿಗೆ ಹೇಳಿದ್ರೆ ಸಾಕು, ಅವನೇ ಕರ್ಕೊಂಡು ಹೋಗ್ತಾನೆ. ಅಡಿಕೆ ತೋಟಗಳೆಲ್ಲ ದಾಟಿ, ಕಾಡಿನ ಮಧ್ಯ ಆತನದ್ದೊಂದು ಸಣ್ಣ ಗುಡಿಸಲು. ಆ ಅಜ್ಜನೊಬ್ಬ ಪವಾಡ ಪುರುಷ. ಊರೂರುಗಳಿಂದ ದೊಡ್ಡ ದೊಡ್ಡ ಜನರೆಲ್ಲಾ ಆಶೀರ್ವಾದಕ್ಕೆ ಬರ್ತಾರೆ,\" ಎಂದ ಲಕ್ಷ್ಮಣ.",[11,40,41],{},"ಆದರೆ ನನ್ನ ಕುತೂಹಲವನ್ನು ನಿಜವಾಗಿಯೂ ಕೆರಳಿಸಿದ್ದು ಬೇರೆಯೇ ವಿಷಯ. ಆ ಅಜ್ಜ ಒಂದು ಬೃಹತ್ ಕಾಳಿಂಗ ಸರ್ಪವನ್ನು ಸಾಕಿದ್ದಾನಂತೆ. ಅದು ಅವನ ಗುಡಿಸಲಿನ ಪಕ್ಕದಲ್ಲೇ ಇರುವ ಹುತ್ತದಲ್ಲಿ ವಾಸವಾಗಿದ್ದು, ಪ್ರತಿದಿನ ಸಂಜೆ ತಪ್ಪದೇ ಬಂದು, ಅಜ್ಜ ಕೊಡುವ ಹಾಲನ್ನು ಕುಡಿದು ಹೋಗುತ್ತದೆ ಎಂಬ ವಿಷಯ ನನ್ನ ತಲೆಯಲ್ಲಿ ಹುಳ ಬಿಟ್ಟಿತು.",[11,43,44],{},"ನನ್ನ ಜೊತೆ ಜೀಪ್ ಹಂಚಿಕೊಂಡಿದ್ದ ಆ ಧೂರ್ಜಟಿ ರಾಯರು, ಈ ವಿಷಯ ಕೇಳಿ ಒಮ್ಮೆಲೇ ಗರಂ ಆದರು. \"ಇಡೀ ದೇಶವೇ ಇಂಥಾ ನಕಲಿ ಸ್ವಾಮಿಗಳಿಂದ, ಬೂಟಾಟಿಕೆ ಬೈರಾಗಿಗಳಿಂದ ತುಂಬಿ ಹೋಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಿಜ್ಞಾನ ಬೆಳೆದಂತೆ, ನಮ್ಮ ಜನ ಈ ಮೂಢನಂಬಿಕೆಗಳ ಕೆಸರಿಗೆ ಇನ್ನಷ್ಟು ಆಳವಾಗಿ ಇಳಿಯುತ್ತಿದ್ದಾರೆ. ಇದೊಂದು ರೋಗವಿದ್ದಂತೆ, ಇದರ ಬಗ್ಗೆ ಯೋಚಿಸಿದರೆ ಮೈಯೆಲ್ಲಾ ಉರಿಯುತ್ತೆ,\" ಎಂದು ತಮ್ಮ ಮುಂದಿದ್ದ ಸೊಳ್ಳೆಯೊಂದನ್ನು ಬ್ಯಾಟ್ ತೆಗೆದು ‘ಪಟಾರ್’ ಎಂದು ಹೊಡೆದು ಮುಗಿಸಿದರು.",[11,46,47],{},"ಧೂರ್ಜಟಿ ರಾಯರು ನಲವತ್ತರ ಆಸುಪಾಸಿನ, ಕೃಶಕಾಯದ, ಬಿಳಿಚಿಕೊಂಡ ಮನುಷ್ಯ. ಚೂಪಾದ ಮುಖ, ಬೂದು ಬಣ್ಣದ ಕಣ್ಣುಗಳು. ನಮ್ಮಿಬ್ಬರ ಆಕಸ್ಮಿಕ ಪರಿಚಯ ಆಗಿದ್ದು ಈ ಫಾರೆಸ್ಟ್ ರೆಸ್ಟ್ ಹೌಸ್‌ನಲ್ಲೇ. ನಾನು ಬೆಂಗಳೂರಿನಿಂದ ನನ್ನ ಸ್ವಂತ ಊರಾದ ಮಂಗಳೂರಿನತ್ತ ಹೊರಟಿದ್ದೆ, ಮಧ್ಯೆ ಸಾಗರದಲ್ಲಿ ಹದಿನೈದು ದಿನಗಳ ರಜೆ ಕಳೆಯುವ ಯೋಚನೆಯಿತ್ತು. ಪ್ರವಾಸಿ ಮಂದಿರಗಳೆಲ್ಲಾ ಭರ್ತಿಯಾಗಿದ್ದರಿಂದ, ಅನಿವಾರ್ಯವಾಗಿ ಕಾಡಿನ ಮಧ್ಯದ ಈ ಫಾರೆಸ್ಟ್ ರೆಸ್ಟ್ ಹೌಸ್‌ಗೆ ಬರಬೇಕಾಯಿತು. ಆದರೆ ದಟ್ಟ ಅರಣ್ಯದ ನಡುವೆ, ಜಿಟಿಜಿಟಿ ಮಳೆಯ ಸದ್ದಿನೊಂದಿಗೆ ಇರುವುದು ನನಗೇನೂ ಬೇಸರ ತಂದಿರಲಿಲ್ಲ; ಬದಲಾಗಿ ಒಂದು ವಿಚಿತ್ರವಾದ ನೆಮ್ಮದಿ ಮತ್ತು ರೋಮಾಂಚನವನ್ನು ನೀಡುತ್ತಿತ್ತು.",[11,49,50],{},"ರಾಯರು ನನಗಿಂತ ಒಂದು ದಿನ ಮುಂಚೆಯೇ ಬಂದಿದ್ದರು. ಸುತ್ತಮುತ್ತಲ ಜಾಗ ನೋಡಲು ನಾವು ಇಲಾಖೆಯ ಜೀಪನ್ನು ಹಂಚಿಕೊಂಡಿದ್ದೆವು. ಹಿಂದಿನ ದಿನ ಹೊಸನಗರದ ಸಮೀಪದ ಇತಿಹಾಸ ಪ್ರಸಿದ್ಧ ನಗರ ಕೋಟೆಯನ್ನು ನೋಡಿ ಬಂದಿದ್ದೆವು. ಇಂದು ಬೆಳಿಗ್ಗೆ ಕೋಟೆಗುಡ್ಡ ನೋಡಿ, ಮಧ್ಯಾಹ್ನ ಗುಡವಿ ಪಕ್ಷಿಧಾಮದಲ್ಲಿ ಕಳೆದೆವು. ಏಳು ಮೈಲಿ ವಿಸ್ತಾರವಾದ ಆ ಜೌಗು ಪ್ರದೇಶದ ಪುಟ್ಟ ಪುಟ್ಟ ನಡುಗಡ್ಡೆಗಳಲ್ಲಿ ಪ್ರಪಂಚದ ಯಾವ್ಯಾವ ಮೂಲೆಯಿಂದಲೋ ಬಂದಿದ್ದ ಬಗೆಬಗೆಯ ಪಕ್ಷಿಗಳು ಗೂಡು ಕಟ್ಟಿಕೊಂಡಿದ್ದವು. ನಾನು ಆ ಪಕ್ಷಿ ಪ್ರಪಂಚದಲ್ಲಿ ಕಳೆದುಹೋಗಿದ್ದೆ. ಆದರೆ ರಾಯರು ಮಾತ್ರ ಮಲೆನಾಡಿನ ಕಾಡಿನಲ್ಲಿ ವಿಪರೀತವಾಗಿ ಕಾಡುವ ಸಣ್ಣ ಸಣ್ಣ 'ನುಸಿ'ಗಳ ಕಾಟದಿಂದ ಹೈರಾಣಾಗಿ ಗೊಣಗುತ್ತಿದ್ದರು.",[11,52,53],{},"ರಾತ್ರಿ ಎಂಟೂವರೆಯ ಹೊತ್ತಿಗೆ ಊಟ ಮುಗಿಸಿ, ಜಗಲಿಯಲ್ಲಿದ್ದ ಬೆತ್ತದ ಕುರ್ಚಿಗಳ ಮೇಲೆ ಕುಳಿತು, ಬೆಳದಿಂಗಳಲ್ಲಿ ಕಾಡಿನ ಸೌಂದರ್ಯವನ್ನು ಆಸ್ವಾದಿಸುತ್ತಿದ್ದೆವು. \"ಲಕ್ಷ್ಮಣ ಹೇಳಿದನಲ್ಲ, ಆ ಅಜ್ಜನನ್ನು ಒಮ್ಮೆ ನೋಡಿಕೊಂಡು ಬಂದರೆ ಹೇಗಿರುತ್ತೆ?\" ಎಂದು ಮಾತು ಆರಂಭಿಸಿದೆ.",[11,55,56],{},"ತಮ್ಮ ಸಿಗರೇಟನ್ನು ದೂರದ ನೀಲಗಿರಿ ಮರದತ್ತ ಎಸೆಯುತ್ತಾ, ರಾಯರು ಖಾರವಾಗಿ ಹೇಳಿದರು, \"ಕಾಳಿಂಗ ಸರ್ಪಗಳನ್ನು ಎಂದಿಗೂ ಪಳಗಿಸಲು ಸಾಧ್ಯವಿಲ್ಲ. ನನಗೆ ಹಾವುಗಳ ಬಗ್ಗೆ ಚೆನ್ನಾಗಿ ಗೊತ್ತು. ನನ್ನ ಬಾಲ್ಯವೆಲ್ಲಾ ಕಾಫಿ ತೋಟಗಳಲ್ಲಿ ಕಳೆದಿದ್ದು. ನನ್ನ ಸ್ವಂತ ಕೈಯಿಂದಲೇ ಹತ್ತಾರು ಹಾವುಗಳನ್ನು ಕೊಂದಿದ್ದೇನೆ. ಕಾಳಿಂಗ ಸರ್ಪ ಅತ್ಯಂತ ವಿಷಕಾರಿ, ಅತ್ಯಂತ ಕ್ರೂರ ಜೀವಿ. ಸಾಧು ಅದಕ್ಕೆ ಹಾಲು ಕುಡಿಸುತ್ತಾನೆ ಎಂಬ ಕಥೆಯನ್ನು ಸುಲಭವಾಗಿ ನಂಬಬಾರದು.\"",[11,58,59],{},[14,60],{"alt":61,"src":62},"","\u002Fstories\u002Fpore-kalachidaga\u002Fimage2.png",[11,64,65],{},"ನಾನು ಹೇಳಿದೆ, \"ನಾಳೆ ಬೆಳಿಗ್ಗೆ ನಾವು ಕೆಳದಿ ನೋಡಲು ಹೋಗುತ್ತಿದ್ದೇವೆ. ಮಧ್ಯಾಹ್ನದ ಮೇಲೆ ನಮಗೆ ಮಾಡಲು ಬೇರೇನೂ ಕೆಲಸವಿಲ್ಲ.\"",[11,67,68],{},"\"ನಿಮಗೆ ಈ ಸಾಧು-ಸಂತರ ಮೇಲೆ ಬಹಳ ನಂಬಿಕೆ ಇದ್ದ ಹಾಗಿದೆ?\" ಅವರ ಧ್ವನಿಯಲ್ಲಿದ್ದ ವ್ಯಂಗ್ಯ ನನಗೆ ಸ್ಪಷ್ಟವಾಗಿ ತಿಳಿಯಿತು. ಆದರೂ ನಾನು ಶಾಂತವಾಗಿ, \"ನಂಬಿಕೆಯ ಪ್ರಶ್ನೆಯೇ ಇಲ್ಲ, ನಾನೆಂದೂ ಸಾಧುಗಳ ಸಹವಾಸ ಮಾಡಿಲ್ಲ. ಆದರೆ ಈ ಹಾವಿನ ಕಥೆಯ ಬಗ್ಗೆ ಸ್ವಲ್ಪ ಕುತೂಹಲವಿದೆ,\" ಎಂದೆ.",[11,70,71],{},"\"ನನಗೂ ಒಂದು ಕಾಲದಲ್ಲಿ ಕುತೂಹಲವಿತ್ತು, ಆದರೆ ಆ ಸಾಧುವೊಬ್ಬನ ಸಹವಾಸದ ನಂತರ...\" ಎಂದು ರಾಯರು ನಿಲ್ಲಿಸಿದರು. ಅವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತಂತೆ. ಯಾರೋ ಸನ್ಯಾಸಿ ಕೊಟ್ಟ ಗಿಡಮೂಲಿಕೆಯ ಔಷಧಿಯನ್ನು ನಂಬಿ ಕುಡಿದು, ತೀವ್ರವಾದ ಹೊಟ್ಟೆನೋವಿನಿಂದ ಬಳಲಿದ್ದರಂತೆ. ಅಂದಿನಿಂದ, ಭಾರತದ ಶೇಕಡಾ ತೊಂಬತ್ತರಷ್ಟು ಸಾಧುಗಳನ್ನು ಅವರು ನಕಲಿ ಎಂದೇ ಪರಿಗಣಿಸಿದ್ದರು.",[11,73,74],{},"ನನಗೆ ಅವರ ಈ ಕೋಪ ತಮಾಷೆಯಾಗಿ ಕಂಡಿತು. \"ನೀವು ಕಾಳಿಂಗ ಸರ್ಪವನ್ನು ಪಳಗಿಸಲು ಸಾಧ್ಯವಿಲ್ಲ ಅಂದಿರಿ; ನಮ್ಮಂಥವರಿಗೆ ಅದು ಅಸಾಧ್ಯವಿರಬಹುದು. ಆದರೆ ಹಿಮಾಲಯದ ಗುಹೆಗಳಲ್ಲಿ ಹುಲಿಗಳೊಂದಿಗೆ ವಾಸಿಸುವ ಯೋಗಿಗಳ ಬಗ್ಗೆ ನಾನು ಕೇಳಿದ್ದೇನೆ,\" ಎಂದು ಅವರನ್ನು ಕೆಣಕಿದೆ.",[11,76,77],{},"\"ಕೇಳಿರಬಹುದು, ಆದರೆ ನಿಮ್ಮ ಕಣ್ಣಾರೆ ನೋಡಿದ್ದೀರಾ?\" ರಾಯರು ಸವಾಲು ಹಾಕಿದರು.",[11,79,80],{},"ನಾನು ಇಲ್ಲ ಎನ್ನಬೇಕಾಯಿತು.",[11,82,83],{},"\"ನೀವು ಎಂದಿಗೂ ನೋಡುವುದಿಲ್ಲ,\" ರಾಯರು ಮುಂದುವರಿಸಿದರು. \"ಇದು ಕಟ್ಟುಕಥೆಗಳ ನಾಡು. ಪುರಾಣಗಳನ್ನೇ ನೋಡಿ. ಇತಿಹಾಸ ಎನ್ನುತ್ತಾರೆ, ಆದರೆ ವಾಸ್ತವದಲ್ಲಿ ಅವು ಅಸಂಬದ್ಧ ಕಥೆಗಳು. ಹತ್ತು ತಲೆಯ ರಾವಣ, ಬಾಲಕ್ಕೆ ಬೆಂಕಿ ಇಟ್ಟು ಊರು ಸುಟ್ಟ ಹನುಮಂತ, ಭೀಮನ ಹಸಿವು, ಘಟೋತ್ಕಚ, ಹಾರುವ ಪುಷ್ಪಕ ವಿಮಾನ... ಇದಕ್ಕಿಂತ ಅಸಂಬದ್ಧವಾದದ್ದನ್ನು ಊಹಿಸಲು ಸಾಧ್ಯವೇ? ಆದರೂ ವಿದ್ಯಾವಂತರೂ ಸಹ ಈ ಕಥೆಗಳನ್ನು ಕಣ್ಮುಚ್ಚಿ ನಂಬುತ್ತಾರೆ.\"",[11,85,86],{},"ರಾಯರ ಈ ಎಲ್ಲ ವಿರೋಧದ ನಡುವೆಯೂ, ಮರುದಿನ ನಾವು ಕೆಳದಿ ವೀಕ್ಷಣೆ ಮುಗಿಸಿ, ಮಧ್ಯಾಹ್ನ ಜೀಪಿನಲ್ಲಿ ಅಜ್ಜನ ಆಶ್ರಮವನ್ನು ತಲುಪಿದೆವು. ರಾಯರೂ ಸುಮ್ಮನೆ ಜೊತೆಯಾದರು, ಬಹುಶಃ ಅವರಿಗೂ ಒಳಗೊಳಗೆ ಕುತೂಹಲವಿತ್ತು. ಆಶ್ರಮವು ಕಾಡಿನ ಮಧ್ಯದ ಬಯಲಿನಲ್ಲಿ ಒಂದು ಬೃಹತ್ ಹುಣಸೆ ಮರದ ಕೆಳಗಿತ್ತು.",[11,88,89],{},"ತೆಂಗಿನ ಗರಿಯ ಗುಡಿಸಲಿನಲ್ಲಿ, ಅಜ್ಜ ಕರಡಿಯ ಚರ್ಮದ ಮೇಲೆ ಕುಳಿತಿದ್ದ; ಆತನ ಪಕ್ಕದಲ್ಲಿ ಒಬ್ಬ ಯುವ ಶಿಷ್ಯನಿದ್ದ. ಸೂರ್ಯಾಸ್ತಕ್ಕೆ ಇನ್ನೂ ಒಂದು ಗಂಟೆ ಇತ್ತು, ಆದರೆ ಕಾಡಿನ ದಟ್ಟಣೆಯಿಂದಾಗಿ ಜಾಗ ಸಾಕಷ್ಟು ಕತ್ತಲಾಗಿತ್ತು. ಅಜ್ಜನ ಮುಂದೆ ಬೆಂಕಿ ಉರಿಯುತ್ತಿತ್ತು, ಕೈಯಲ್ಲಿ ಗಾಂಜಾ ಚಿಲುಮೆ ಇತ್ತು. ಬೆಂಕಿಯ ಬೆಳಕಿನಲ್ಲಿ ಗುಡಿಸಲಿನ ಗೋಡೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದತ್ತ ನನ್ನ ದೃಷ್ಟಿ ಹರಿಯಿತು. ಅದರಲ್ಲಿ ಸುಮಾರು ಹನ್ನೆರಡು ಅಡಿ ಉದ್ದನೆಯ ಹಾವಿನ ಪೊರೆಗಳು ನೇತಾಡುತ್ತಿದ್ದವು!",[11,91,92],{},"ರಾಯರು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು: \"ಸುತ್ತಿ ಬಳಸಿ ಮಾತು ಬೇಡ; ಹಾವಿನ ಊಟದ ಸಮಯದ ಬಗ್ಗೆ ಕೇಳಿ.\"",[11,94,95],{},"\"ಹಾಗಾದರೆ ನೀವು ಬಾಲಕೃಷ್ಣನನ್ನು ನೋಡಬೇಕೆ?\" ಚಿಲುಮೆಯ ಹಿಂದಿನಿಂದ ನಗುತ್ತಾ, ನಮ್ಮ ಮನಸ್ಸನ್ನು ಓದಿದವರಂತೆ ಅಜ್ಜ ಕೇಳಿದ. ಡ್ರೈವರ್ ರಾಮಣ್ಣ ಬರುವಾಗ ಆ ಹಾವಿನ ಹೆಸರು ಬಾಲಕೃಷ್ಣ ಎಂದು ಹೇಳಿದ್ದ.",[11,97,98],{},"ನಾನು ಕೈ ಮುಗಿದು, “ಹೌದು ಸ್ವಾಮಿಗಳೆ” ಎಂದೆ.",[11,100,101],{},[14,102],{"alt":61,"src":103},"\u002Fstories\u002Fpore-kalachidaga\u002Fimage3.png",[11,105,106],{},"ಅಜ್ಜ ದುಃಖದಿಂದ ತಲೆಯಾಡಿಸಿದ. ಪ್ರತಿದಿನ ಸಂಜೆ ತಪ್ಪದೆ ಬರುವ ಬಾಲಕೃಷ್ಣ ನಿನ್ನೆಯಿಂದ ಬಂದಿಲ್ಲ ಎಂದ.",[11,108,109],{},"\"ಇಂದು ಹುಣ್ಣಿಮೆ, ಹಾಗಾಗಿ ಅವನು ಬರುವುದಿಲ್ಲ. ಆದರೆ ನಾಳೆ ಖಂಡಿತ ಬರುತ್ತಾನೆ.\" ಜೊತೆಗೆ, ಹಾವಿಗೆ ಹುಷಾರಿಲ್ಲದಾಗ ಹುತ್ತದೊಳಗೆ ಕೆಂಪು ಇರುವೆಗಳು ಸೇರಿಕೊಂಡು ಹಾವನ್ನು ಕಾಡುತ್ತಿದ್ದವು, ತಾನು ಶಾಪ ನೀಡಿ ಅವನ್ನೆಲ್ಲಾ ನಾಶಮಾಡಿದೆ ಎಂದ.",[11,111,112],{},"ಈ ಹಂತದಲ್ಲಿ ರಾಯರು ನನ್ನತ್ತ ಕಡೆಗಣ್ಣಿನಿಂದ ವ್ಯಂಗ್ಯವಾಗಿ ನೋಡಿದರು. ಕಾವಿ ಬಟ್ಟೆ, ಉದ್ದನೆಯ ಜಡೆ, ಕಿವಿಯಲ್ಲಿ ಕಬ್ಬಿಣದ ಓಲೆ—ಅಜ್ಜ ಬೇರೆ ಸಾಧುಗಳಿಗಿಂತ ಭಿನ್ನವಾಗಿ ಕಾಣುತ್ತಿರಲಿಲ್ಲ. ಆದರೂ ಆ ಮಬ್ಬುಗತ್ತಲಲ್ಲಿ ಆತನಿಂದ ಕಣ್ಣು ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಹಾವು ನೋಡುವ ಭರವಸೆ ಹೋದ ಮೇಲೆ ಅಲ್ಲಿ ಕೂರುವ ಅರ್ಥವಿರಲಿಲ್ಲ. ಕತ್ತಲಾದರೆ ಕಾಡುಮೃಗಗಳ ಕಾಟ ಬೇರೆ. ನಾವು ಅಜ್ಜನಿಗೆ ನಮಸ್ಕರಿಸಿ, ಜೀಪ್ ಕಡೆಗೆ ಹೊರಟೆವು.",[11,114,115],{},"ಕೆಲವು ಹೆಜ್ಜೆ ಹೋಗಿದ್ದೆವಷ್ಟೇ, ರಾಯರು ಹಠಾತ್ತನೆ, \"ಆ ಹಾವು ಇರೋ ಹುತ್ತವನ್ನಾದರೂ ನೋಡಬಹುದಿತ್ತಲ್ಲಾ?\" ಎಂದರು.",[11,117,118],{},"ನಾವು ಡ್ರೈವರ್ ರಾಮಣ್ಣನನ್ನು ಕರೆದೆವು. ಗುಡಿಸಲಿನತ್ತ ಹೋಗುವ ಬದಲು, ಒಂದು ಕಿರಿದಾದ ದಾರಿಯಲ್ಲಿ ಸಾಗಿ ಮುಳ್ಳಿನ ಪೊದೆಯೊಂದರ ಬಳಿ ಬಂದೆವು. ರಾಮಣ್ಣ ಆ ಪೊದೆಯ ಹಿಂದೆಯೇ ಹುತ್ತವಿದೆ ಎಂದ. ರಾಯರು ತಮ್ಮ ಜೇಬಿನಿಂದ ಒಂದು ಸಣ್ಣ ಎಲೆಕ್ಟ್ರಿಕ್ ಟಾರ್ಚ್ ತೆಗೆದು ಬೆಳಕು ಬಿಟ್ಟರು. ಹುತ್ತ ಕಾಣಿಸಿತು. ಆದರೆ ಹಾವು ಕೇವಲ ಇಬ್ಬರು ಕುತೂಹಲಿಗಳಿಗೆ ಮುಖ ತೋರಿಸಲು ಹೊರಬರುವ ಸಾಧ್ಯತೆ ಇತ್ತೇ? ನಾನು ವಾಪಸ್ ಹೋಗೋಣ ಎಂದೆ, ಆದರೆ ರಾಯರು ಹಾವನ್ನು ಹೊರಗೆಳೆಯುವ ಛಲದಲ್ಲಿದ್ದಂತೆ ಕಂಡಿತು.",[11,120,121],{},"ಹಠಾತ್ತನೆ ರಾಯರು ಮಣ್ಣಿನ ಹೆಂಟೆಗಳನ್ನು ಹೆಕ್ಕಿ ಆ ಪೊದೆಗೆ ಬಲವಾಗಿ ಹೊಡೆಯಲು ಪ್ರಾರಂಭಿಸಿದರು!",[11,123,124],{},"\"ಏನಾಯ್ತು ನಿಮಗೆ? ನೀವೇ ಅದರ ಅಸ್ತಿತ್ವವನ್ನೇ ನಂಬಿರಲಿಲ್ಲವಲ್ಲಾ?\" ಎಂದು ನಾನು ಚಕಿತನಾಗಿ ಕೇಳಿದೆ.",[11,126,127],{},"\"ನಾನು ಈಗಲೂ ನಂಬಿಲ್ಲ. ಇದರಿಂದ ಅದು ಹೊರಬರದಿದ್ದರೆ, ಅಜ್ಜನ ಕಥೆ ಬರೀ ಸುಳ್ಳು ಅಂತ ಸಾಬೀತಾಗುತ್ತೆ. ಇಂಥ ಸುಳ್ಳುಗಳು ನಾಶವಾದಷ್ಟೂ ಒಳ್ಳೇದು!\" ಎನ್ನುತ್ತಾ ದೊಡ್ಡ ಹೆಂಟೆಯೊಂದನ್ನು ಎಸೆದರು.",[11,129,130],{},"ಅದು ಢಪ್ ಎಂದು ಬಿದ್ದು ಪೊದೆಯ ಒಂದು ಭಾಗವನ್ನು ನಾಶಮಾಡಿತು. ಕೆಲವು ಸೆಕೆಂಡುಗಳ ಕಾಲ ಮೌನ. ಆಮೇಲೆ ಒಂದು ಒಣಗಿದ, ಮೃದುವಾದ ಅನಿರ್ದಿಷ್ಟ ಸ್ಥಾಯಿಯ ಹಿಸ್ಸ್ ಸಿಳ್ಳೆ ಕೇಳಿಸಿತು. ಎಲೆಗಳ ಶಬ್ಧದೊಂದಿಗೆ ಟಾರ್ಚ್‌ನ ಬೆಳಕಿನಲ್ಲಿ ಕಪ್ಪು ಮತ್ತು ಹೊಳೆಯುವ ಏನೋ ಹುತ್ತದಿಂದ ನಿಧಾನವಾಗಿ ಹೊರಬರುತ್ತಿರುವುದು ಕಂಡಿತು.",[11,132,133],{},"ಮರುಕ್ಷಣವೇ, ಪೊದೆಯ ಎಲೆಗಳು ಅಲುಗಾಡಿ ಬೃಹತ್ ಕಾಳಿಂಗ ಸರ್ಪದ ತಲೆ ಹೊರಬಂದಿತು!",[11,135,136],{},"ಬೆಳಕು ಅದರ ಹೊಳೆಯುವ ಕಣ್ಣುಗಳನ್ನು ಮತ್ತು ಕವಲೊಡೆದ ನಾಲಿಗೆಯನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು. ರಾಮಣ್ಣ ಭಯದಿಂದ, \"ಸಾಬ್ ಬನ್ನಿ ಹೋಗೋಣ,\" ಎಂದು ಗೋಗರೆಯುತ್ತಿದ್ದ. ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನಾನು ಎಂದೂ ನೋಡಿರಲಿಲ್ಲ. ಅಚ್ಚರಿಯೆಂದರೆ ಅದು ನಮ್ಮ ಮೇಲೆ ದಾಳಿ ಮಾಡಲು ಯಾವುದೇ ಪ್ರಯತ್ನ ಮಾಡಲಿಲ್ಲ.",[11,138,139],{},"ಹಠಾತ್ತನೆ ಟಾರ್ಚ್‌ನ ಬೆಳಕು ನಡುಗಿತು. ರಾಯರು ತ್ವರಿತವಾಗಿ ಕಲ್ಲೊಂದನ್ನು ಎತ್ತಿಕೊಂಡು ತಮ್ಮೆಲ್ಲಾ ಶಕ್ತಿಯನ್ನು ಬಳಸಿ ಆ ಹಾವಿನತ್ತ ಎಸೆದರು! ಸತತವಾಗಿ ಎರಡು, ಮೂರು ಕಲ್ಲುಗಳು ಕ್ಷಿಪಣಿಗಳಂತೆ ಬಿದ್ದವು.",[11,141,142],{},[14,143],{"alt":61,"src":144},"\u002Fstories\u002Fpore-kalachidaga\u002Fimage4.png",[11,146,147],{},"ಮುಂದೆ ಏನಾಗುತ್ತದೆಂಬ ಭೀಕರ ಕಲ್ಪನೆ ನನ್ನನ್ನು ಆವರಿಸಿತು.",[11,149,150],{},"\"ರಾಯರೇ, ಯಾಕೀ ಹುಚ್ಚು ಕೆಲಸ ಮಾಡಿದ್ರಿ?\" ಎಂದು ಬೆಚ್ಚಿಬಿದ್ದು ಕೂಗಿದೆ.",[11,152,153],{},"ರಾಯರ ಮುಖದಲ್ಲಿ ಒಂದು ವಿಕೃತವಾದ ವಿಜಯದ ನಗೆ ಮೂಡಿತ್ತು. ಉಬ್ಬಸ ಬಿಡುತ್ತಲೇ, \"ಒಂದು ಮಾರಿಗಾದರೂ ಗತಿ ಕಾಣಿಸಿದ್ನಲ್ಲ!\" ಎಂದು ಉದ್ಗರಿಸಿದರು.",[11,155,156],{},"ಡ್ರೈವರ್ ರಾಮಣ್ಣ ಬಾಯಿ ಬಿಟ್ಟುಕೊಂಡು ಆ ಹುತ್ತದತ್ತಲೇ ನೋಡುತ್ತಿದ್ದ. ನಾನು ರಾಯರ ಕೈಯಿಂದ ಟಾರ್ಚ್ ಕಿತ್ತುಕೊಂಡು ಬೆಳಕು ಚೆಲ್ಲಿದೆ. ಹಾವಿನ ನಿರ್ಜೀವ ದೇಹದ ಒಂದು ಭಾಗ ಕಾಣುತ್ತಿತ್ತು. ಸುತ್ತಲಿನ ಎಲೆಗಳು ರಕ್ತದಿಂದ ಒದ್ದೆಯಾಗಿದ್ದವು.",[11,158,159],{},"ಅಜ್ಜ ಮತ್ತು ಆತನ ಶಿಷ್ಯ ನಮ್ಮ ಹಿಂದೆಯೇ ಬಂದು ನಿಂತಿದ್ದ ಕಲ್ಪನೆ ನನಗಿರಲಿಲ್ಲ. ನಾವು ತಿರುಗಿ ನೋಡಿದಾಗ, ಅಜ್ಜ ಹನ್ನೆರಡು ಅಡಿ ದೂರದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದು ನಿಂತಿದ್ದ. ಆತನ ಕಣ್ಣುಗಳು ರಾಯರ ಮೇಲೆ ನೆಟ್ಟಿದ್ದವು. ಆ ಕಣ್ಣುಗಳಲ್ಲಿದ್ದ ದ್ವೇಷ, ಆಶ್ಚರ್ಯ ಮತ್ತು ಕೋಪವನ್ನು ವಿವರಿಸಲು ಅಸಾಧ್ಯ. ಅದು ರವಿವರ್ಮನ ಪೇಂಟಿಂಗ್‌ನಲ್ಲಿ ದುರ್ವಾಸ ಮುನಿಯು ಶಕುಂತಲೆಗೆ ಶಾಪ ನೀಡುವ ದೃಶ್ಯದಂತಿತ್ತು.",[11,161,162],{},"ಅಜ್ಜ ಬಲಗೈಯನ್ನು ರಾಯರ ಕಡೆಗೆ ಎತ್ತಿ ತೋರುಬೆರಳು ಚಾಚಿದ. ಆತನ ಉಗುರುಗಳು ಒಂದು ಇಂಚಿಗಿಂತ ಉದ್ದವಿದ್ದವು.",[11,164,165],{},"ಆತನ ಕಟುದ್ವನಿ ಕಾಡಿನ ಕತ್ತಲಿನ ನಡುವೆ ಪ್ರತಿಧ್ವನಿಸಿತು",[11,167,168],{},"\"ಒಂದು ಬಾಲಕೃಷ್ಣ ಹೋದರೆ ಏನಂತೆ; ಅದರ ಸ್ಥಾನ ತುಂಬಲು ಮತ್ತೊಂದು ಬರುತ್ತದೆ. ಬಾಲಕೃಷ್ಣ ಅಮರ...\"",[11,170,171],{},"ರಾಯರು ಕರವಸ್ತ್ರದಿಂದ ಕೈ ಒರೆಸಿಕೊಂಡು, \"ನಡಿಯಿರಿ ಹೋಗೋಣ\" ಎಂದರು. ಶಿಷ್ಯ ಆ ನಿರ್ಜೀವ ಹಾವನ್ನು ಎತ್ತಿಕೊಂಡ. ಹಾವಿನ ಉದ್ದ ನೋಡಿ ನಾನು ಬೆಚ್ಚಿಬಿದ್ದೆ! ನಾವು ಜೀಪ್‌ನತ್ತ ಮರಳಿದೆವು.",[11,173,174],{},"ಹಿಂದಿರುಗುವ ದಾರಿಯಲ್ಲಿ, ರಾಯರು ಒಂದಕ್ಷರವೂ ಮಾತನಾಡದೆ ಕಲ್ಲಿನಂತೆ ಸುಮ್ಮನಾಗಿದ್ದರು. ಆತನೇನೂ ತೊಂದರೆ ಮಾಡದಿದ್ದರೂ ಆ ಹಾವನ್ನು ಏಕೆ ಕೊಂದಿರಿ ಎಂದು ಕೇಳಿದೆ. ಅವರು ಮತ್ತೆ ಸಿಡಿಯಬಹುದು ಅಂದುಕೊಂಡೆ. ಆದರೆ ಅವರು ಕೇಳಿದ್ದು ಘಟನೆಗೆ ಸಂಬಂಧವೇ ಇಲ್ಲದ ಒಂದು ವಿಚಿತ್ರ ಪ್ರಶ್ನೆ.",[11,176,177],{},"\"ಖಗಂ ಯಾರೆಂದು ನಿಮಗೆ ಗೊತ್ತೇ?\"",[11,179,180],{},"ಖಗಂ? ಆ ಹೆಸರು ಎಲ್ಲೋ ಕೇಳಿದಂತಿದೆ, ಆದರೆ ಎಲ್ಲಿ ಎಂದು ನೆನಪಾಗಲಿಲ್ಲ. ರಾಯರು ಆ ಹೆಸರನ್ನು ಎರಡು ಬಾರಿ ಪಿಸುಗುಟ್ಟಿ ಮತ್ತೆ ಮೌನಕ್ಕೆ ಶರಣಾದರು.",[11,182,183],{},"ರೆಸ್ಟ್‌ಹೌಸ್ ತಲುಪುವಾಗ ಆರೂವರೆ ಆಗಿತ್ತು. ಅಜ್ಜನ ಆ ದ್ವೇಷದ ನೋಟ ಇನ್ನೂ ನನ್ನ ಕಣ್ಣಮುಂದೆ ಕಟ್ಟಿದಂತೆಯೇ ಇತ್ತು . ಬಾಲಕೃಷ್ಣ ಅಮರ, ಕಾಡಿನಲ್ಲಿ ಬೇರೆ ಕಾಳಿಂಗ ಸರ್ಪಗಳು ಇದ್ದೇ ಇರುತ್ತವೆ, ಶಿಷ್ಯರು ಮತ್ತೊಂದನ್ನು ಹಿಡಿಯುತ್ತಾರೆ ಎಂದುಕೊಂಡು ಸಮಾಧಾನ ಪಟ್ಟುಕೊಂಡೆ.",[11,185,186],{},"ರಾತ್ರಿಯ ಊಟಕ್ಕೆ ಲಕ್ಷ್ಮಣ ಬಿಸಿ ಪತ್ರೊಡೆ, ದಾಲ್ ಮತ್ತು ಚಪಾತಿ ಸಿದ್ಧಪಡಿಸಿದ್ದ. ರಾಯರು ಚೆನ್ನಾಗಿ ಊಟ ಮಾಡುವವರು; ಆದರೆ ಇಂದು ಅವರಿಗೆ ಹಸಿವೇ ಇಲ್ಲದಂತಿತ್ತು.",[11,188,189],{},"\"ಹಾವನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪ ಆಗ್ತಿದೆಯಾ?\" ಎಂದು ವಿಚಾರಿಸಿದೆ.",[11,191,192],{},"ಅವರು ಪೆಟ್ರೋಮ್ಯಾಕ್ಸ್ ಅನ್ನೇ ದಿಟ್ಟಿಸುತ್ತಿದ್ದರು. \"ಹಾವು ಸಿಳ್ಳೆ ಹೊಡೆಯುತ್ತಿತ್ತು,\" ಎಂದು ಮೃದುವಾದ ಧ್ವನಿಯಲ್ಲಿ ಹೇಳಿದರು.",[11,194,195],{},"ನಾನು ನಗುತ್ತಾ, \"ಸಿಳ್ಳೆ ಹೊಡೆಯುತ್ತಿತ್ತೇ, ಅಥವಾ ಬುಸುಗುಟ್ಟುತ್ತಿತ್ತೇ?\" ಎಂದೆ.",[11,197,198],{},"\"ಹೌದು, ಬುಸುಗುಟ್ಟುತ್ತಿತ್ತು... ಹಾವುಗಳು ಬುಸುಗುಟ್ಟಿದಾಗ ಮಾತನಾಡುತ್ತವೆ... ಇದು ನನಗೆ ಗೊತ್ತು, ಇದು ನನಗೆ ಗೊತ್ತು...\" ರಾಯರು ತಾವೇ ಕೆಲವು ಬುಸುಗುಟ್ಟುವ ಶಬ್ದಗಳನ್ನು (ಸ್ಸ್.. ಸ್ಸ್..) ಮಾಡಿದರು. ಅವರ ತಲೆ ಲಯಬದ್ಧವಾಗಿ ತೂಗುತ್ತಿತ್ತು.",[11,200,201],{},"\"ಹಾವುಗಳು ಬುಸುಗುಟ್ಟಿದಾಗ ಮಾತನಾಡುತ್ತವೆ... ಹಾವುಗಳು ಕಚ್ಚಿದಾಗ ಸಾಯಿಸುತ್ತವೆ... ಇದು ನನಗೆ ಗೊತ್ತು... ಇದೇನು? ಮೇಕೆ ಹಾಲೇ?\" ಅವರ ಮುಂದಿದ್ದ ಪಾಯಸವನ್ನು ನೋಡಿ ಕೇಳಿದರು.",[11,203,204],{},"ಲಕ್ಷ್ಮಣನಿಗೆ 'ಮೇಕೆ' ಪದ ಅರ್ಥವಾಗದೆ, \"ಹೌದು ಸಾಬ್, ಹಾಲಿದೆ\" ಎಂದ.",[11,206,207],{},"ಅವರ ನಡವಳಿಕೆ ಮಿತಿಮೀರುತ್ತಿತ್ತು. ಬಹುಶಃ ಅವರಿಗೇ ಅದು ಅರಿವಾಗಿರಬೇಕು, \"ಬಿಸಿಲಿನಲ್ಲಿ ಓಡಾಡಿದ್ದೆ, ನಾಳೆ ವಿಶ್ರಾಂತಿ ಬೇಕು,\" ಎಂದು ಎದ್ದು ಹೋದರು.",[11,209,210],{},"ಮರುದಿನ ಸಂಜೆ ನಾನು ಮಂಗಳೂರಿನ ಬಸ್ಸು ಹಿಡಿಯಬೇಕಿತ್ತು. ನನ್ನ ಸೂಟ್‌ಕೇಸ್ ಪ್ಯಾಕ್ ಮಾಡಿ, ಲಾಟೀನು ಬತ್ತಿ ಸಣ್ಣದು ಮಾಡಿ ಪೈಜಾಮ ಹಾಕಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ರಾಯರ ಕೋಣೆಯತ್ತ ಇದ್ದ ಬಾಗಿಲಿನ ಮೇಲೆ ಯಾರೋ ತಟ್ಟಿದ ಶಬ್ದವಾಯಿತು.",[11,212,213],{},"\"ನಿಮ್ಮ ಬಳಿ ಫ್ಲಿಟ್, ಅಥವಾ ಸೊಳ್ಳೆ ಓಡಿಸುವ ಔಷಧ ಇದೆಯೇ?\" ರಾಯರ ಒರಟಾದ ಪಿಸುಮಾತು.",[11,215,216],{},"\"ಜಾಲರಿ ಮುಚ್ಚಿದ್ದರೂ ಸೊಳ್ಳೆ ಕಚ್ಚುತ್ತಿವೆಯೇ?\" ಎಂದು ಕೇಳುತ್ತಾ ಬಾಗಿಲು ತೆರೆದೆ.",[11,218,219],{},"\"ಯಾಕೋ ಒಂಥರಾ ಒರಟು ಅನಸ್ತಿದೆ, ನನ್ನ ಚರ್ಮದ ಮೇಲೆ ಕಲೆ ಆದಂತೆ ಕಣಿಸ್ತಿದೆ\" ಎಂದರು. ನಾನು ಅವರನ್ನು ಒಳಗೆ ಕರೆದು ಲಾಟೀನು ದೀಪ ಎತ್ತಿ ಹಿಡಿದು ನೋಡಿದೆ.",[11,221,222],{},"ವರಾಂಡದ ಬೆಳಕಿನಲ್ಲಿ ಆ ಗುರುತುಗಳು ಸ್ಪಷ್ಟವಾಗಿ ಕಂಡವು. ಅವರ ಚರ್ಮದ ಮೇಲೆ ಬೂದುಬಣ್ಣದ, ವಜ್ರಾಕಾರದ ಕಲೆಗಳಿದ್ದವು! ಅಂತಹದ್ದನ್ನು ನಾನು ಹಿಂದೆಂದೂ ನೋಡಿರಲಿಲ್ಲ. \"ಯಾವುದೋ ವಿಚಿತ್ರ ಅಲರ್ಜಿಯಾಗಿರಬಹುದು, ಮಲಗಿ, ನಾಳೆ ಬೆಳಿಗ್ಗೆ ಡಾಕ್ಟರ್ ಹತ್ತಿರ ಹೋಗೋಣ,\" ಎಂದು ಕಳುಹಿಸಿದೆ.",[11,224,225],{},"ಹಾಸಿಗೆ ಹತ್ತಿ ಮಲಗಲು ಯತ್ನಿಸುತ್ತಿದ್ದೆ. ನನಗೆ ಯಾವಾಗಲೂ ಮಲಗಿದ ಹತ್ತು ನಿಮಿಷದಲ್ಲಿ ನಿದ್ದೆ ಬಂದಿರುತ್ತದೆ. ಆದರೆ ಆ ರಾತ್ರಿ ಹಾಗಾಗಲಿಲ್ಲ. ಅಷ್ಟರಲ್ಲಿ ಹೊರಗೆ ಕಾರು ಬಂದ ಶಬ್ದ ಕೇಳಿಸಿತು. ಅದರ ಬೆನ್ನಲ್ಲೇ ಇಂಗ್ಲಿಷ್ ಮಾತುಗಳು ಮತ್ತು ಒಂದು ನಾಯಿಯ ಬೊಗಳುವಿಕೆ ಕೇಳಿಸಿತು! ಯಾರೋ ವಿದೇಶಿ ಪ್ರವಾಸಿಗರು ಬಂದಿರಬೇಕು. ತೀಕ್ಷ್ಣವಾದ ಗದರುವಿಕೆಯಿಂದ ನಾಯಿ ಸುಮ್ಮನಾಯಿತು. ಕೀಟಗಳ ಸದ್ದು ಬಿಟ್ಟರೆ ಮತ್ತೆ ಕಾಡು ಸ್ತಬ್ಧವಾಯಿತು. ಆದರೆ ಪಕ್ಕದ ಕೋಣೆಯಲ್ಲಿ ರಾಯರು ಇನ್ನೂ ಕತ್ತಲಲ್ಲಿ ಅತ್ತಿತ್ತ ಅಲೆದಾಡುತ್ತಿದ್ದರು.",[11,227,228],{},"ರಾತ್ರಿ ಹತ್ತು ಮುಕ್ಕಾಲು. ಮತ್ತೆ ಬಾಗಿಲಿನ ಮೇಲೆ ಬಡಿದ ಸದ್ದು ಕೇಳಿಸಿತು. ರಾಯರೇ ತಟ್ಟಿರಬೇಕು ಎಂದು ನಾನು ಹಾಸಿಗೆಯಿಂದಲೇ ಕೂಗಿದೆ, \"ಏನಾಯ್ತು ರಾಯರೇ?\"",[11,230,231],{},"\"ಸ್-ಸ್-ಸ್-ಸ್-\"",[11,233,234],{},"\"ಏನು ಸ್ಪಷ್ಟವಾಗಿ ಹೇಳಿ!\"",[11,236,237],{},"\"ಸ್-ಸ್-ಸ್-ಸ್-\" ಅವರು ಮಾತನಾಡಲು ಕಷ್ಟಪಡುತ್ತಿದ್ದರು. ನನಗೆ ಸಣ್ಣದಾಗಿ ಬಾಗಿಲು ತೆರೆದೆ.",[11,239,240],{},"\"ಸ್-ಸ್-ಸ್-ಸ್ನೇಕ್ ಅನ್ನೋದನ್ನ ಒಂದು 'ಎಸ್' ಇಂದ ಬರೆಯುತ್ತಾರಾ?\" ಅವರು ಅಸಂಬದ್ಧವಾಗಿ ಕೇಳಿದರು.",[11,242,243],{},"\"ರಾತ್ರಿ ಈ ಹೊತ್ತಲ್ಲಿ ಇದನ್ನ ಕೇಳೋಕೆ ಬಾಗಿಲು ತಟ್ಟಿದ್ರಾ?\" ಎಂದು ಸಿಟ್ಟಾದೆ.",[11,245,246],{},"\"ಕೇವಲ ಒಂದು ಎಸ್... ಸ್-ಸ್-ಸ್-ಸ್ಲೀಪ್ ... ಆದರೆ ಇಂದು ಸಂಜೆ ಸ್-ಸ್-ಸನ್ ಸೆಟ್ಟಿಂಗ್...\" ಅವರು ಪದೇ ಪದೇ 'ಸ್-ಸ್' ಎಂದು ತೊದಲುತ್ತಿದ್ದರು.",[11,248,249],{},"\"ನಿಮ್ಮ ನಾಲಿಗೆಗೆ ಏನಾಗಿದೆ? ಟಾರ್ಚ್ ಕೊಡಿ,\" ಎಂದು ಅವರ ಕೋಣೆಗೆ ಹೋಗಿ ಮುಖಕ್ಕೆ ಟಾರ್ಚ್ ಬಿಟ್ಟೆ. ಅವರು ತಮ್ಮ ನಾಲಿಗೆ ಹೊರಹಾಕಿದರು. ಅದರಲ್ಲಿ ಏನೋ ದೋಷವಿತ್ತು. ಮಧ್ಯದಲ್ಲಿ ಒಂದು ತೆಳುವಾದ ಕೆಂಪು ರೇಖೆ ಸೀಳಿದಂತೆ ಕಾಣುತ್ತಿತ್ತು!",[11,251,252],{},"ಕೋಣೆ ಅರೆಕತ್ತಲೆಯಲ್ಲಿತ್ತು. ಕಿಟಕಿಯ ಮೂಲಕ ಚಂದ್ರನ ಬೆಳಕು ನೆಲದ ಮೇಲೆ ಬೀಳುತ್ತಿತ್ತು. ರಾಯರು ಬೆಚ್ಚಗಿನ ಬಟ್ಟೆ ಹಾಕಿರಲಿಲ್ಲ. \"ಹೋಗಿ ಮಲಗಿ,\" ಎಂದು ಕಟ್ಟುನಿಟ್ಟಾಗಿ ಹೇಳಿ, ನಾನು ಬಲವಂತವಾಗಿ ಅವರನ್ನು ಮಲಗಿಸಲು ಅವರ ಕೈ ಮುಟ್ಟಿದೆ.",[11,254,255],{},[14,256],{"alt":61,"src":257},"\u002Fstories\u002Fpore-kalachidaga\u002Fimage5.png",[11,259,260],{},"ಕ್ಷಣಾರ್ಧದಲ್ಲಿ ನಾನು ಕರೆಂಟ್ ಹೊಡೆದಂತೆ ಹಿಂದೆ ಜಿಗಿದೆ! ಧೂರ್ಜಟಿ ರಾಯರ ದೇಹ ಹೆಪ್ಪುಗಟ್ಟಿದ ಮಂಜುಗಡ್ಡೆಯಂತೆ ತಂಪಾಗಿತ್ತು! ಜೀವಂತ ಮನುಷ್ಯ ಇಷ್ಟು ತಂಪಾಗಿರಲು ಸಾಧ್ಯವೇ ಇರಲಿಲ್ಲ. ಅವರು ಕಣ್ಣು ಮಿಟುಕಿಸದೇ ನನ್ನನ್ನೇ ದಿಟ್ಟಿಸುತ್ತಿದ್ದರು. ಮತ್ತೆ ಮತ್ತೆ ನಾಲಿಗೆ ಹೊರಹಾಕುತ್ತಿದ್ದರು.",[11,262,263],{},"ಪಿಸುಮಾತಿನಲ್ಲಿ ಹೇಳಿದರು, \"ಅಜ್ಜ ನನ್ನನ್ನು ಕರೆಯುತ್ತಿದ್ದಾನೆ—'ಬಾಲಕೃಷ್ಣ!'... ಅವನು ಕರೆಯುವುದು ನನಗೆ ಕೇಳಿಸುತ್ತಿದೆ.\"",[11,265,266],{},"ಹಠಾತ್ತನೆ ಅವರ ಮೊಣಕಾಲುಗಳು ಮಡಚಿಕೊಂಡವು. ನೆಲದ ಮೇಲೆ ಎದೆಯೊಡ್ಡಿ ಚಪ್ಪಟೆಯಾಗಿ ಬಿದ್ದರು. ಮೊಣಕೈಗಳ ಮೇಲೆ ತಮ್ಮನ್ನು ತಾವು ಹಾವಿನ ಹಾಗೆ ತೆವಳುತ್ತಾ ಹಾಸಿಗೆಯ ಕೆಳಗಿನ ಕತ್ತಲಲ್ಲಿ ಕಣ್ಮರೆಯಾದರು!",[11,268,269],{},"ನಾನು ಬೆವರಿನಲ್ಲಿ ತೊಯ್ದು, ಓಡಿ ಬಂದು ನನ್ನ ಕೋಣೆಯ ಬಾಗಿಲು ಹಾಕಿಕೊಂಡು ಚಿಲಕ ಹಾಕಿದೆ. ಕಂಬಳಿಯೊಳಗೆ ತೂರಿ ತಲೆಯಿಂದ ಕಾಲಿನವರೆಗೆ ಮುಚ್ಚಿಕೊಂಡು ನಡುಗುತ್ತಿದ್ದೆ. ರಾಯರು ಹಾವನ್ನು ಕೊಂದಿದ್ದರು. ಅಜ್ಜ 'ಬಾಲಕೃಷ್ಣನ ಸ್ಥಾನಕ್ಕೆ ಮತ್ತೊಂದು ಬರುತ್ತದೆ' ಎಂದಿದ್ದ. ಆ ಮೈಮೇಲಿನ ವಜ್ರಾಕೃತಿಯ ಕಲೆಗಳು, ಸೀಳುತ್ತಿದ್ದ ನಾಲಿಗೆ, ತಂಪಾದ ದೇಹ... ಎಲ್ಲವೂ ತಲೆಗೆ ಹೋಯಿತು.",[11,271,272],{},"ಹಠಾತ್ತನೆ ನನಗೆ ನೆನಪಾಯಿತು! ಧೂರ್ಜಟಿ ರಾಯರು 'ಖಗಂ' ಬಗ್ಗೆ ಕೇಳಿದ್ದರಲ್ಲ? ಬಾಲ್ಯದಲ್ಲಿ ಮಹಾಭಾರತದಲ್ಲಿ ಓದಿದ್ದ ಕಥೆಯದು! ಖಗಂ ಎಂದರೆ ಮುನಿಯ ಶಾಪದಿಂದ ಹಾವಾಗಿ ಬದಲಾದ ವ್ಯಕ್ತಿಯ ಕಥೆ! ಖಗಂ—ಹಾವು—ಶಾಪ—ಎಲ್ಲವೂ ತಾಳೆಯಾಗುತ್ತಿತ್ತು!!.",[11,274,275],{},"ಮತ್ತೆ ಬಾಗಿಲು ತಟ್ಟುವ ಶಬ್ದ, ಈ ಬಾರಿ ಬಾಗಿಲಿನ ತಳಭಾಗದಲ್ಲಿ ನೆಲದ ಮಟ್ಟದಲ್ಲಿ! ಒಮ್ಮೆ, ಎರಡು, ಮೂರು ಬಾರಿ... ನಾನು ಉಸಿರು ಬಿಗಿಹಿಡಿದೆ. ಒಂದು ಭೀಕರ 'ಸ್ಸ್-ಸ್ಸ್' ಸೀತ್ಕಾರ ಬಾಗಿಲಿನಿಂದ ದೂರ ಸರಿಯಿತು.",[11,277,278],{},"ಸ್ವಲ್ಪ ಹೊತ್ತಿನಲ್ಲಿ ಪಕ್ಕದ ಕೋಣೆಯ ಕಡೆಯಿಂದ ಇಲಿ ಅಥವಾ ಹೆಗ್ಗಣ ಕೀರಲು ದನಿಯಲ್ಲಿ ಚೀರುವ ಶಬ್ದ ಕೇಳಿಸಿತು. ಮತ್ತೆ ಮೌನ.",[11,280,281],{},"ಸಮಯ ಒಂದು ಗಂಟೆಗೆ ಇನ್ನೂ ಕಾಲು ಗಂಟೆ ಇತ್ತು. ರಾಯರ ಕೋಣೆಯ ಬಾಗಿಲು ತೆರೆದು ಅವರು ವರಾಂಡಕ್ಕೆ ಬಂದ ಶಬ್ದವಾಯಿತು. ಅವರು ರಾತ್ರಿಯ ಈ ಹೊತ್ತಲ್ಲಿ ಎಲ್ಲಿಗೆ ಹೋಗುತ್ತಿರ ಬಹುದು?",[11,283,284],{},"ಆಚೆಕಡೆ ಇಂದ ಒಂದು ಸಣ್ಣ ಆದರೆ ಕೀರಲು ದ್ವನಿಯ ಸಿಳ್ಳೆ ಕೇಳಿಸಿತು.",[11,286,287],{},"ಆ ಸೀತ್ಕಾರದ ಶಬ್ದ ಈಗ ನಿಖರವಾಗಿ ನನ್ನ ಕಿಟಕಿಯ ಹೊರಗಿತ್ತು. ಪುಣ್ಯಕ್ಕೆ ಕಿಟಕಿಗೆ ದಪ್ಪನೆಯ ಜಾಲರಿಯ ಸೊಳ್ಳೆ ಪರದೆ ಹೊಡೆದಿದ್ದರು!",[11,289,290],{},"ಗೋಡೆಯ ಮೇಲೇರಿ ಏನೋ ಕಿಟಕಿಯತ್ತ ಬರುತ್ತಿತ್ತು. ಜಾಲರಿಯ ಹಿಂದೆ ಒಂದು ತಲೆ ಕಾಣಿಸಿಕೊಂಡಿತು. ಮಬ್ಬು ಬೆಳಕಿನಲ್ಲಿ ಒಂದು ಜೊತೆ ಮಣಿಯಂತ ಕಣ್ಣುಗಳು ನನ್ನನ್ನೇ ಸ್ಥಿರವಾಗಿ ದಿಟ್ಟಿಸುತ್ತಿದ್ದವು. ಆ ಕಣ್ಣುಗಳು ರಾಯರದೇ, ಆದರೆ ಆ ಮುಖ...!",[11,292,293],{},"ಒಂದು ನಿಮಿಷ ದಿಟ್ಟಿಸಿದ ಆ ಕಣ್ಣುಗಳು, ಪಕ್ಕದ ಕೋಣೆಯಲ್ಲಿದ್ದ ಟೂರಿಸ್ಟ್‌ಗಳ ನಾಯಿ ಹಠಾತ್ತನೆ ಬೊಗಳಿದ್ದರಿಂದ ಅತ್ತ ತಿರುಗಿದವು. ನಂತರ ಕಣ್ಮರೆಯಾದವು. ನಾಯಿ ತನ್ನೆಲ್ಲಾ ಶಕ್ತಿಯಿಂದ ಬೊಗಳುತ್ತಿತ್ತು. ಇಂಗ್ಲಿಷರ ಗದರುವಿಕೆ ಕೇಳಿಸಿತು. ನಾಯಿಯ ಬೊಗಳುವಿಕೆ ನರಳುವಿಕೆಯಾಗಿ ಬದಲಾಗಿ,ಸ್ತಬ್ಧವಾಯಿತು.",[11,295,296],{},"\"ಹಾವುಗಳು ಬುಸುಗುಟ್ಟಿದಾಗ ಮಾತನಾಡುತ್ತವೆ...\" ಆ ಹುಚ್ಚು ಸಾಲುಗಳು ನನ್ನ ತಲೆಯಲ್ಲಿ ಗುಂಯ್ ಗುಡುತ್ತಿದ್ದವು. ಹಾಗೇ ಯಾವಾಗಲೋ ನಿದ್ದೆಗೆ ಜಾರಿದ್ದೆ.",[11,298,299],{},"ಬೆಳಿಗ್ಗೆ ಉದ್ವಿಗ್ನ ಇಂಗ್ಲಿಷ್ ಮಾತುಗಳ ಶಬ್ದಕ್ಕೆ ಎಚ್ಚರವಾಯಿತು. ಸಮಯ ಆರು ಗಂಟೆ. ನಾನು ಬೇಗನೆ ಎದ್ದು ವರಾಂಡಕ್ಕೆ ಬಂದೆ. ಆ ಪ್ರವಾಸಿಗರ ಸಾಕುನಾಯಿ ರಾತ್ರಿ ಸತ್ತಿತ್ತು. ಯಾವುದೋ ಕ್ರೂರ ಹಾವು ಕಚ್ಚಿರಬೇಕು ಎಂದು ಅವರು ಅಂದುಕೊಳ್ಳುತ್ತಿದ್ದರು.",[11,301,302],{},"ನಾನು ರಾಯರ ಕೋಣೆಯತ್ತ ಹೋದೆ. ಬಾಗಿಲು ಅರ್ಧ ತೆರೆದಿತ್ತು, ಕೋಣೆ ಖಾಲಿಯಿತ್ತು. ಅಡುಗೆಯವ ಲಕ್ಷ್ಮಣನೂ ರಾಯರನ್ನು ನೋಡಿರಲಿಲ್ಲ. ಕಾಡಿನ ಸುತ್ತಮುತ್ತ ಹುಡುಕಿದರೂ ರಾಯರ ಸುಳಿವೇ ಇರಲಿಲ್ಲ.",[11,304,305],{},"ಆ ಧೂರ್ಜಟಿ ರಾಯರಿಗೆ ಏನಾಯಿತು ಎಂದು ತಿಳಿಯದೆ ನಾನು ಸಾಗರ ಬಿಟ್ಟು ಮಂಗಳೂರಿಗೆ ಹೋಗುವಂತಿರಲಿಲ್ಲ. ಪೇಟೆಗೆ ಹೋಗಿ ಮಂಗಳೂರಿನ ಮನೆಗೆ ಒಂದು ಕರೆ ಮಾಡಿ ಮಾಡಿ, ಬಸ್ ಟಿಕೆಟ್ ರದ್ದುಪಡಿಸಿ ಮತ್ತೆ ರೆಸ್ಟ್ ಹೌಸ್‌ಗೆ ಮರಳಿದೆ. ಆ ಇಬ್ಬರು ಇಂಗ್ಲಿಷರು ಈ ಮಧ್ಯೆ ತಮ್ಮ ನಾಯಿಯನ್ನು ಹೂತು ಹೋಗಿದ್ದರು.",[11,307,308],{},"ಇಡೀ ಮಧ್ಯಾಹ್ನ ಹುಡುಕಾಟದಲ್ಲೇ ಕಳೆಯಿತು. ನನ್ನ ತಲೆಯಲ್ಲಿ ಈಗ ಒಂದು ಮಸುಕಾದ ಭರವಸೆಯ ಎಳೆ ಇತ್ತು. ಜೀಪ್ ಡ್ರೈವರ್‌ಗೆ, \"ನೇರವಾಗಿ ಹುಣಸೆಕಟ್ಟೆ ಅಜ್ಜನ ಆಶ್ರಮಕ್ಕೆ ಗಾಡಿ ಬಿಡು,\" ಎಂದೆ.",[11,310,311],{},"ಹಿಂದಿನ ದಿನದಂತೆಯೇ, ಅದೇ ಹೊತ್ತಿಗೆ ಸರಿಯಾಗಿ ನಾವು ಆಶ್ರಮ ತಲುಪಿದೆವು. ಅಜ್ಜ ನೆಮ್ಮದಿಯಿಂದ ಗಾಂಜಾ ಚಿಲುಮೆ ಸೇದುತ್ತಾ ಕುಳಿತಿದ್ದ. ಇಂದು ಆತನ ಜೊತೆ ಇನ್ನಿಬ್ಬರು ಶಿಷ್ಯರಿದ್ದರು.",[11,313,314],{},"\"ಸ್ವಾಮಿ, ನಿನ್ನೆ ನನ್ನ ಜೊತೆ ಬಂದಿದ್ದರಲ್ಲ ಅವರ ಬಗ್ಗೆ ಏನಾದರೂ ಮಾಹಿತಿ ಇದೆಯೇ?\" ಎಂದು ನೇರವಾಗಿ ಕೇಳಿದೆ.",[11,316,317],{},"ಅಜ್ಜನ ಮುಖದಲ್ಲಿ ಮೃದುವಾದ ನಗು ಮೂಡಿತು. \"ಖಂಡಿತವಾಗಿಯೂ ಇದೆ! ನಿಮ್ಮ ಜೊತೆಗಾರ ನನ್ನ ಭರವಸೆಯನ್ನು ಈಡೇರಿಸಿದ್ದಾನೆ. ಆತ ನನ್ನ ಬಾಲಕೃಷ್ಣನನ್ನು ಮರಳಿ ತಂದಿದ್ದಾನೆ.\"",[11,319,320],{},"ಅಜ್ಜನ ಪಕ್ಕದಲ್ಲಿ ಮೇಕೆ ಹಾಲಿನ ಮಡಕೆ ಇತ್ತು!",[11,322,323],{},"\"ಅವನನ್ನು ನೀವು ನಿನ್ನೆ ನೋಡಿದ ಸ್ಥಿತಿಯಲ್ಲಿ ಈಗ ನೋಡಲಾರಿರಿ, ಆದರೆ ಆತ ಒಂದು ನೆನಪಿನ ಕಾಣಿಕೆ ಬಿಟ್ಟುಹೋಗಿದ್ದಾನೆ. ಬಾಲಕೃಷ್ಣನ ಹುತ್ತದಿಂದ ಐವತ್ತು ಹೆಜ್ಜೆ ದಕ್ಷಿಣಕ್ಕೆ ಹೋಗಿ ನೋಡಿ,\" ಎಂದ ಅಜ್ಜ.",[11,325,326],{},"ನಾನು ಆ ಹುತ್ತದ ಬಳಿ ಹೋಗಿ, ಮುಳ್ಳಿನ ಪೊದೆಗಳ ಮೂಲಕ ದಕ್ಷಿಣಕ್ಕೆ ಸಾಗಿದೆ. ಒಂದು ಬೇಲದ ಮರದ ಬುಡದಲ್ಲಿ ಏನೋ ಬಿದ್ದಿತ್ತು. ಅದು ವಜ್ರಾಕೃತಿಯ ವಿನ್ಯಾಸದಿಂದ ಕೂಡಿದ, ಹೊಸದಾಗಿ ಕಳಚಿದ ಪೊರೆಯಾಗಿತ್ತು!",[11,328,329],{},"ಆದರೆ ಅದು ಸಾಮಾನ್ಯ ಹಾವಿನ ಪೊರೆಯಾಗಿರಲಿಲ್ಲ. ಹಾವಿನ ದೇಹದಿಂದ ಕೈ ಕಾಲುಗಳು ಹೊರಚಾಚಿಕೊಂಡಿರುತ್ತವೆಯೇ!? ಅದು ನಿಜಕ್ಕೂ ಮನುಷ್ಯನೊಬ್ಬ ಕಳಚಿಟ್ಟ ಪೊರೆಯಾಗಿತ್ತು!",[11,331,332],{},"ಅಲ್ಲಿ, ಹುತ್ತದೊಳಗಿಂದ ಬುಸುಗುಟ್ಟುವ ಸದ್ದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಸೂರ್ಯ ಅಸ್ತಮಿಸುತ್ತಿದ್ದ.",[11,334,335],{},"ಗುಡಿಸಲಿನ ಬಳಿಯಿಂದ ಅಜ್ಜ ಕರೆಯುತ್ತಿದ್ದ: \"ಬಾಲಕೃಷ್ಣ—ಬಾಲಕೃಷ್ಣ—ಬಾಲಕೃಷ್ಣ.\"",[11,337,338],{},[14,339],{"alt":61,"src":340},"\u002Fstories\u002Fpore-kalachidaga\u002Fimage6.png",{"title":61,"searchDepth":342,"depth":342,"links":343},2,[],null,"ಸಾಗರದ ಫಾರೆಸ್ಟ್ ರೆಸ್ಟ್‌ಹೌಸ್‌ನಲ್ಲಿ ತಂಗಿದ್ದ ಇಬ್ಬರು ಪ್ರವಾಸಿಗರು ಕಾಳಿಂಗ ಸರ್ಪವನ್ನು ಸಾಕಿರುವ ಹುಣಸೆಕಟ್ಟೆ ಅಜ್ಜನನ್ನು ನೋಡಲು ಹೋಗುತ್ತಾರೆ — ಮೂಢನಂಬಿಕೆಯನ್ನು ದ್ವೇಷಿಸುವ ಧೂರ್ಜಟಿ ರಾಯರು ಆ ಹಾವನ್ನು ಕೊಂದಾಗ, ಅಜ್ಜನ ಶಾಪ ಅವರನ್ನು ಬೆನ್ನಟ್ಟುತ್ತದೆ.","md",{},true,"\u002Fstories\u002Fpore-kalachidaga",{"title":5,"description":345},"pore-kalachidaga","stories\u002Fpore-kalachidaga","ZnU3KseauOh0L5g6pFiI3MEOlwNECSn7baH_L-MaXls",[355,376,396,415,434,453,472,492,511,530,549,571,590,608,627,646,664,678,697,716,735,753,770,790,807],{"id":356,"title":357,"author":344,"body":358,"category":365,"cover":366,"date":344,"description":367,"extension":346,"featured":368,"meta":369,"navigation":348,"path":370,"readingTime":371,"seo":372,"slug":373,"stem":374,"__hash__":375},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":359,"toc":363},[360],[11,361,362],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":61,"searchDepth":342,"depth":342,"links":364},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",false,{},"\u002Fstories\u002Fantima-teerpu","15 min read",{"title":357,"description":367},"antima-teerpu","stories\u002Fsummary\u002Fantima-teerpu","JUrKHjIBsu5yVw_cs3iWrfrcGDZ7Z2C7wazSJYGU8ec",{"id":377,"title":378,"author":6,"body":379,"category":365,"cover":386,"date":387,"description":388,"extension":346,"featured":348,"meta":389,"navigation":348,"path":390,"readingTime":391,"seo":392,"slug":393,"stem":394,"__hash__":395},"summary\u002Fstories\u002Fsummary\u002Faralagodina-appemidi.md","ಅರಳಗೋಡಿನ ಅಪ್ಪೆಮಿಡಿ",{"type":8,"value":380,"toc":384},[381],[11,382,383],{},"ಶರಾವತಿ ಕಣಿವೆಯ ಅರಳಗೋಡು ಜಂಕ್ಷನ್‌ನಲ್ಲಿ ನೂರಿಪ್ಪತ್ತು ವರ್ಷ ಹಳೆಯ ಜೀರಿಗೆ ಅಪ್ಪೆಮಿಡಿ ಮರವೊಂದಿದೆ. ಅದರ ಎರಡೂ ಬದಿಗಳಲ್ಲಿ ಜಮೀನು ಹೊಂದಿರುವ ರೈತ ಶಂಕರ ಭಟ್ಟ ಮತ್ತು ಅಂಗಡಿ ಮಂಜಪ್ಪ ಇಬ್ಬರ ನಡುವೆ ಹಳೆಯ ವೈಷಮ್ಯವಿದೆ. ಈ ನಡುವೆ ಕೆಪಿಸಿಎಲ್ ಎಂಜಿನಿಯರ್ ವಿದ್ಯುತ್ ಮಾರ್ಗಕ್ಕಾಗಿ ಮರವನ್ನೇ ಕಡಿಯಲು ಬಯಸಿದಾಗ ವಿವಾದ ಸಾಗರದ ಕೋರ್ಟ್ ಮೆಟ್ಟಿಲೇರುತ್ತದೆ. ಕೊನೆಗೆ ಮರದ ಬುಡದಲ್ಲೇ ಹೂತಿದ್ದ 1961ರ ಸರ್ವೆ ಕಲ್ಲು ಮತ್ತು ಭೂಸ್ವಾಧೀನ ದಾಖಲೆ (SVHE-1961) ಬಹಿರಂಗವಾಗಿ, ಮರ ಸರ್ಕಾರಿ ಮುಳುಗಡೆ ಭೂಮಿಯಿಂದ ಖಾಸಗಿಯಾಗಿ ಹೊರಗಿಡಲಾಗಿತ್ತೆಂದು ಸಾಬೀತಾಗಿ, ಮರ ಉಳಿಯುತ್ತದೆ.",{"title":61,"searchDepth":342,"depth":342,"links":385},[],"\u002Fstories\u002Faralagodina-appemidi\u002Fchapter-covers\u002Fmain-cover.png","2026-09-20","ಸಾಗರ ತಾಲೂಕಿನ ಅರಳಗೋಡು ಜಂಕ್ಷನ್‌ನಲ್ಲಿ ನಿಂತಿರುವ 120 ವರ್ಷದ ಜೀರಿಗೆ ಅಪ್ಪೆಮಿಡಿ ಮರವೊಂದು, ಎರಡು ನೆರೆಹೊರೆಯವರ ಹಳೆಯ ದ್ವೇಷ ಮತ್ತು ಅದನ್ನು ಕಡಿಯಲು ಬಯಸುವ ಕೆಪಿಸಿಎಲ್ ವಿದ್ಯುತ್ ಮಾರ್ಗ ಯೋಜನೆಯ ನಡುವೆ ಸಿಲುಕುತ್ತದೆ. ಕೊನೆಗೆ ಮರದ ಬುಡದಲ್ಲಿ ಹೂತಿದ್ದ 1961ರ ಹಳೆಯ ಭೂಸ್ವಾಧೀನ ದಾಖಲೆಯೇ ಅದನ್ನು ಉಳಿಸುತ್ತದೆ.",{},"\u002Fstories\u002Faralagodina-appemidi","35 min read",{"title":378,"description":388},"aralagodina-appemidi","stories\u002Fsummary\u002Faralagodina-appemidi","SjvtPcVSwSPKnFa7zU-PRj0_opaB_V-_ALp2tuK13B0",{"id":397,"title":398,"author":344,"body":399,"category":365,"cover":406,"date":344,"description":407,"extension":346,"featured":368,"meta":408,"navigation":348,"path":409,"readingTime":410,"seo":411,"slug":412,"stem":413,"__hash__":414},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":400,"toc":404},[401],[11,402,403],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":61,"searchDepth":342,"depth":342,"links":405},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":398,"description":407},"chadurangadaata","stories\u002Fsummary\u002Fchadurangadaata","J_40JO0pKkwbjSy0Bl7YrT3K7WPrYtcQXfXdw49lreA",{"id":416,"title":417,"author":344,"body":418,"category":344,"cover":425,"date":344,"description":426,"extension":346,"featured":368,"meta":427,"navigation":348,"path":429,"readingTime":344,"seo":430,"slug":431,"stem":432,"__hash__":433},"summary\u002Fstories\u002Fsummary\u002Fcircle.md","Circle",{"type":8,"value":419,"toc":423},[420],[11,421,422],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":61,"searchDepth":342,"depth":342,"links":424},[],"\u002Fstories\u002Fcircle.jpg","Secrets, love, betrayal and revenge",{"download":428},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":417,"description":426},"circle","stories\u002Fsummary\u002Fcircle","HtDUlHJQO19woJw5xq0ZfSwisiaFKSe9596Wwz1-Sjc",{"id":435,"title":436,"author":344,"body":437,"category":344,"cover":444,"date":344,"description":445,"extension":346,"featured":368,"meta":446,"navigation":348,"path":448,"readingTime":344,"seo":449,"slug":450,"stem":451,"__hash__":452},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":438,"toc":442},[439],[11,440,441],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":61,"searchDepth":342,"depth":342,"links":443},[],"\u002Fstories\u002Fenendu-hesaridali.jpg","I miss you and you'll wait for me",{"download":447},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":436,"description":445},"enendu-hesaridali","stories\u002Fsummary\u002Fenendu-hesaridali","7DDbxl1XxBMe2_Rs4sac35xmCJiAQS8QsM7jNm7cBdw",{"id":454,"title":455,"author":344,"body":456,"category":365,"cover":463,"date":344,"description":464,"extension":346,"featured":368,"meta":465,"navigation":348,"path":466,"readingTime":467,"seo":468,"slug":469,"stem":470,"__hash__":471},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":457,"toc":461},[458],[11,459,460],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":61,"searchDepth":342,"depth":342,"links":462},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":455,"description":464},"gaajina-mane","stories\u002Fsummary\u002Fgaajina-mane","VpjLFjKrSJYTwGHEpQe3dBOoUc63ZhFy8kai0BmiFDQ",{"id":473,"title":474,"author":6,"body":475,"category":365,"cover":482,"date":483,"description":484,"extension":346,"featured":348,"meta":485,"navigation":348,"path":486,"readingTime":487,"seo":488,"slug":489,"stem":490,"__hash__":491},"summary\u002Fstories\u002Fsummary\u002Fhasivu.md","ಹಸಿವು",{"type":8,"value":476,"toc":480},[477],[11,478,479],{},"ಆಗುಂಬೆಯ ಮಳೆಯಲ್ಲಿ ಕಾರ್ತಿಕ್ 'ಪ್ರಕೃತಿ ವನ' ಎಕೋ-ರಿಸಾರ್ಟ್‌ಗೆ ವಿಮರ್ಶೆಗಾಗಿ ಬರುತ್ತಾನೆ. ಮಾಲೀಕ ವಿಶ್ವನಾಥ್ ಪ್ರಕೃತಿಯನ್ನು ಪ್ರೀತಿಸುವುದಿಲ್ಲ — ಅವನು ಅದರ ಕೊಳಕಿನಿಂದ ಓಡಿ ಗಾಜಿನ ಕೋಟೆಯಲ್ಲಿ ಅಡಗಿಕೊಂಡಿದ್ದಾನೆ. ಹಸಿವು, ಒಂದು ಕಪ್ಪು ನಾಯಿ, ಮತ್ತು ಅರಣ್ಯದ ಶಾಪ ಅವನ ಶುದ್ಧತೆಯನ್ನು ಒಡೆದುಹಾಕುತ್ತವೆ.",{"title":61,"searchDepth":342,"depth":342,"links":481},[],"\u002Fstories\u002Fhasivu\u002Fimage1.png","2026-08-26","ಫ್ರೀಲಾನ್ಸ್ ಆರ್ಕಿಟೆಕ್ಟ್ ಕಾರ್ತಿಕ್ ಆಗುಂಬೆಯ ಅರಣ್ಯದ ಮಧ್ಯೆ 'ಪ್ರಕೃತಿ ವನ' ಎಕೋ-ರಿಸಾರ್ಟ್‌ಗೆ ವಿಮರ್ಶೆಗಾಗಿ ಬರುತ್ತಾನೆ — ಮಾಲೀಕ ವಿಶ್ವನಾಥ್‌ನ ಅತಿ-ಶುದ್ಧತೆ ಆರಾಧನೆ, ಹಸಿವು ಮತ್ತು ಕಾಡಿನ ಕಪ್ಪು ನಾಯಿಯ ನಡುವೆ ಭಯಾನಕ ರಹಸ್ಯ ಬಹಿರಂಗವಾಗುತ್ತದೆ.",{},"\u002Fstories\u002Fhasivu","20 min read",{"title":474,"description":484},"hasivu","stories\u002Fsummary\u002Fhasivu","-I1SW84PILB1XH6y7OJO71Xj2iBqf0tbpS7j5wgeqVc",{"id":493,"title":494,"author":344,"body":495,"category":344,"cover":502,"date":344,"description":503,"extension":346,"featured":368,"meta":504,"navigation":348,"path":506,"readingTime":344,"seo":507,"slug":508,"stem":509,"__hash__":510},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":496,"toc":500},[497],[11,498,499],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":61,"searchDepth":342,"depth":342,"links":501},[],"\u002Fstories\u002Fhrudaya-halagide.jpeg","A story about a man who is trying to find himself.",{"download":505},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":494,"description":503},"hrudaya-halagide","stories\u002Fsummary\u002Fhrudaya-halagide","BwxcvDanUawFms-DmTUvltqYPOpZUSLQf_ZsxyQuj1Y",{"id":512,"title":513,"author":344,"body":514,"category":365,"cover":521,"date":344,"description":522,"extension":346,"featured":368,"meta":523,"navigation":348,"path":525,"readingTime":467,"seo":526,"slug":527,"stem":528,"__hash__":529},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":515,"toc":519},[516],[11,517,518],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":61,"searchDepth":342,"depth":342,"links":520},[],"\u002Fstories\u002Fin-the-ruins-of-memory.png","A story of love, loss, and what remains.",{"download":524},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":513,"description":522},"in-the-ruins-of-memory","stories\u002Fsummary\u002Fin-the-ruins-of-memory","Dim-G5cJJLL4tm64Ac3G957HzXDrphMLdDhDLrt_JrI",{"id":531,"title":532,"author":344,"body":533,"category":365,"cover":540,"date":344,"description":541,"extension":346,"featured":368,"meta":542,"navigation":348,"path":543,"readingTime":544,"seo":545,"slug":546,"stem":547,"__hash__":548},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":534,"toc":538},[535],[11,536,537],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":61,"searchDepth":342,"depth":342,"links":539},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":532,"description":541},"koneya-tappoppige","stories\u002Fsummary\u002Fkoneya-tappoppige","28gnmTjvyoRVIFU-5q5_aYIKdQr6EGBjnKl22VLeSzs",{"id":550,"title":551,"author":344,"body":552,"category":344,"cover":562,"date":344,"description":563,"extension":346,"featured":368,"meta":564,"navigation":348,"path":566,"readingTime":344,"seo":567,"slug":568,"stem":569,"__hash__":570},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":553,"toc":560},[554,557],[11,555,556],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,558,559],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":61,"searchDepth":342,"depth":342,"links":561},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":565},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":551,"description":563},"last-secret-of-a-merchant","stories\u002Fsummary\u002Flast-secret-of-a-merchant","fct7RNIJQVur6_KAqvB0-zVsw3ejbo0Ow1df6iWn4UI",{"id":572,"title":573,"author":344,"body":574,"category":344,"cover":581,"date":344,"description":582,"extension":346,"featured":368,"meta":583,"navigation":348,"path":585,"readingTime":344,"seo":586,"slug":587,"stem":588,"__hash__":589},"summary\u002Fstories\u002Fsummary\u002Flove-triangle.md","Love Triangle",{"type":8,"value":575,"toc":579},[576],[11,577,578],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":61,"searchDepth":342,"depth":342,"links":580},[],"\u002Fstories\u002Flove_triangle.jpg","A story about a love triangle",{"download":584},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":573,"description":582},"love-triangle","stories\u002Fsummary\u002Flove-triangle","4KKg1IVRmXQ2p5eYV41R_gR0li-9gWwnXEMeWCJ0evo",{"id":591,"title":592,"author":344,"body":593,"category":344,"cover":600,"date":344,"description":503,"extension":346,"featured":368,"meta":601,"navigation":348,"path":603,"readingTime":344,"seo":604,"slug":605,"stem":606,"__hash__":607},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":594,"toc":598},[595],[11,596,597],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":61,"searchDepth":342,"depth":342,"links":599},[],"\u002Fstories\u002Fmaleyali_joteyali.png",{"download":602},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":592,"description":503},"maleyali-joteyali","stories\u002Fsummary\u002Fmaleyali-joteyali","tWrkCZoXrvI7_WW6DWJgirL6LjXH4kmh1W2ro9BHYbc",{"id":609,"title":610,"author":344,"body":611,"category":365,"cover":618,"date":344,"description":619,"extension":346,"featured":368,"meta":620,"navigation":348,"path":621,"readingTime":622,"seo":623,"slug":624,"stem":625,"__hash__":626},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":612,"toc":616},[613],[11,614,615],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":61,"searchDepth":342,"depth":342,"links":617},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":610,"description":619},"mooka-devara-sannidhi","stories\u002Fsummary\u002Fmooka-devara-sannidhi","W7-KYwAEjCv7KbWq6TRuqEza5Dd0huFiyyCjsKiUbI8",{"id":628,"title":629,"author":344,"body":630,"category":637,"cover":638,"date":344,"description":503,"extension":346,"featured":368,"meta":639,"navigation":348,"path":641,"readingTime":371,"seo":642,"slug":643,"stem":644,"__hash__":645},"summary\u002Fstories\u002Fsummary\u002Fnever-again.md","Never Again",{"type":8,"value":631,"toc":635},[632],[11,633,634],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":61,"searchDepth":342,"depth":342,"links":636},[],"Romance","\u002Fstories\u002Fnever_again.jpg",{"download":640},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":629,"description":503},"never-again","stories\u002Fsummary\u002Fnever-again","zOYvmv4aaipJI1u-Wy5HJlFqdvCWXJqa_oGiGcXoz2w",{"id":647,"title":648,"author":344,"body":649,"category":344,"cover":656,"date":344,"description":503,"extension":346,"featured":368,"meta":657,"navigation":348,"path":659,"readingTime":344,"seo":660,"slug":661,"stem":662,"__hash__":663},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":650,"toc":654},[651],[11,652,653],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":61,"searchDepth":342,"depth":342,"links":655},[],"\u002Fstories\u002Fninagagi.jpg",{"download":658},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":648,"description":503},"ninagagi","stories\u002Fsummary\u002Fninagagi","WitsQOO2kPxdYgskM0VW61hYXX-cl1Z51U_d-HM-Cnc",{"id":665,"title":5,"author":6,"body":666,"category":365,"cover":16,"date":673,"description":345,"extension":346,"featured":348,"meta":674,"navigation":348,"path":349,"readingTime":371,"seo":675,"slug":351,"stem":676,"__hash__":677},"summary\u002Fstories\u002Fsummary\u002Fpore-kalachidaga.md",{"type":8,"value":667,"toc":671},[668],[11,669,670],{},"ಮಲೆನಾಡಿನ ಕಾಡಿನ ನಡುವೆ ಹುಣಸೆಕಟ್ಟೆ ಅಜ್ಜನೊಬ್ಬ 'ಬಾಲಕೃಷ್ಣ' ಎಂಬ ಬೃಹತ್ ಕಾಳಿಂಗ ಸರ್ಪಕ್ಕೆ ಪ್ರತಿದಿನ ಹಾಲು ಕುಡಿಸುತ್ತಾನಂತೆ. ಸಾಧು-ಸಂತರನ್ನು ನಕಲಿಗಳೆಂದು ಹೀಗಳೆಯುವ ಧೂರ್ಜಟಿ ರಾಯರು ಆ ಹಾವನ್ನು ಕಲ್ಲು ಹೊಡೆದು ಕೊಲ್ಲುತ್ತಾರೆ. 'ಬಾಲಕೃಷ್ಣ ಅಮರ' ಎಂಬ ಅಜ್ಜನ ಮಾತು ಆ ರಾತ್ರಿ ಫಾರೆಸ್ಟ್ ರೆಸ್ಟ್‌ಹೌಸ್‌ನಲ್ಲಿ ಭಯಾನಕವಾಗಿ ನಿಜವಾಗತೊಡಗುತ್ತದೆ.",{"title":61,"searchDepth":342,"depth":342,"links":672},[],"2026-11-01",{},{"title":5,"description":345},"stories\u002Fsummary\u002Fpore-kalachidaga","ZyaF0SKzEpv3HBZh_XNXcRl4M5UZtNIxEROEz05G0QY",{"id":679,"title":680,"author":344,"body":681,"category":344,"cover":688,"date":344,"description":689,"extension":346,"featured":368,"meta":690,"navigation":348,"path":692,"readingTime":344,"seo":693,"slug":694,"stem":695,"__hash__":696},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":682,"toc":686},[683],[11,684,685],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":61,"searchDepth":342,"depth":342,"links":687},[],"\u002Fstories\u002Flove_unexpected.jpg","A story of a girl",{"download":691},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":680,"description":689},"priti-anirikshita","stories\u002Fsummary\u002Fpriti-anirikshita","pK1PiS0K-tOVlBrwvOH8SrUAyVT1SLBhxkugg3aPJ1k",{"id":698,"title":699,"author":6,"body":700,"category":365,"cover":707,"date":708,"description":709,"extension":346,"featured":348,"meta":710,"navigation":348,"path":711,"readingTime":410,"seo":712,"slug":713,"stem":714,"__hash__":715},"summary\u002Fstories\u002Fsummary\u002Frakta-kastoori.md","ರಕ್ತ ಕಸ್ತೂರಿ",{"type":8,"value":701,"toc":705},[702],[11,703,704],{},"ಮಲೆನಾಡಿನ ಮುಂಗಾರು ಮಳೆಯಲ್ಲಿ ಬೈರಾಪುರ ಶಾಲಾ ಶಿಕ್ಷಕ ವಸಂತ, ತಂಗಿಯ ಮದುವೆಗಾಗಿ 'ಫೈನಾನ್ಸ್ ಕಾಳಿಂಗ' ಬಳಿ ಸಾಲ ಕೇಳಲು ಹೋಗುತ್ತಾನೆ. ಒಂದು ಹಳೆಯ ಅಂಬಾಸಿಡರ್ ಕಾರು, ಕಸ್ತೂರಿ ಕಳ್ಳಸಾಗಣೆ ಮತ್ತು ಕಾಳಿಮಡ್ಡಿ ಅರಣ್ಯದ ರಕ್ತಸಿಕ್ತ ರಹಸ್ಯಗಳು ಅವನ ಸರಳ ಜೀವನವನ್ನು ಒಂದೇ ರಾತ್ರಿಯಲ್ಲಿ ಬದಲಾಯಿಸುತ್ತವೆ.",{"title":61,"searchDepth":342,"depth":342,"links":706},[],"\u002Fstories\u002Frakta-kastoori\u002Fimage1.png","2026-08-23","ಬೈರಾಪುರ ಶಾಲಾ ಶಿಕ್ಷಕ ವಸಂತ, ತಂಗಿಯ ಮದುವೆಗಾಗಿ ಸಾಲ ಮಾಡಲು 'ಫೈನಾನ್ಸ್ ಕಾಳಿಂಗ' ಬಳಿ ಹೋಗುತ್ತಾನೆ — ಆ ಪ್ರಯಾಣವು ಅಂಬಾಸಿಡರ್ ಕಾರು, ಕಸ್ತೂರಿ ಕಳ್ಳಸಾಗಣೆ ಮತ್ತು ಕಾಳಿಮಡ್ಡಿ ಅರಣ್ಯದ ರಕ್ತಸಿಕ್ತ ರಹಸ್ಯಗಳೊಂದಿಗೆ ಅವನ ಜೀವನವನ್ನು ಬದಲಾಯಿಸುತ್ತದೆ.",{},"\u002Fstories\u002Frakta-kastoori",{"title":699,"description":709},"rakta-kastoori","stories\u002Fsummary\u002Frakta-kastoori","a-xVUa2tjp32BgdaXn0ZHGybPqzG-3fi9bOsqKE5CRA",{"id":717,"title":718,"author":344,"body":719,"category":344,"cover":726,"date":344,"description":727,"extension":346,"featured":368,"meta":728,"navigation":348,"path":730,"readingTime":344,"seo":731,"slug":732,"stem":733,"__hash__":734},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":720,"toc":724},[721],[11,722,723],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":61,"searchDepth":342,"depth":342,"links":725},[],"\u002Fstories\u002Ftears_of_martyr.jpg","A soldier never cries...",{"download":729},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":718,"description":727},"tears-of-a-martyr","stories\u002Fsummary\u002Ftears-of-a-martyr","yMIQTppT2o3twzYS_07AMU5nJHA0cG2laRdSVNkCtEQ",{"id":736,"title":737,"author":344,"body":738,"category":344,"cover":745,"date":344,"description":503,"extension":346,"featured":368,"meta":746,"navigation":348,"path":748,"readingTime":344,"seo":749,"slug":750,"stem":751,"__hash__":752},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":739,"toc":743},[740],[11,741,742],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":61,"searchDepth":342,"depth":342,"links":744},[],"\u002Fstories\u002Fthe_burning_desires.jpg",{"download":747},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":737,"description":503},"the-burning-desires","stories\u002Fsummary\u002Fthe-burning-desires","xpkmtmBBI2ExmMPiseQ6Lbp3zGJOAnFg2H5uDgZuqgA",{"id":754,"title":755,"author":344,"body":756,"category":344,"cover":763,"date":344,"description":503,"extension":346,"featured":368,"meta":764,"navigation":348,"path":765,"readingTime":344,"seo":766,"slug":767,"stem":768,"__hash__":769},"summary\u002Fstories\u002Fsummary\u002Fthe-gentleman.md","The Gentleman",{"type":8,"value":757,"toc":761},[758],[11,759,760],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":61,"searchDepth":342,"depth":342,"links":762},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":755,"description":503},"the-gentleman","stories\u002Fsummary\u002Fthe-gentleman","MkxE82T71M2kkSN7cx0IltHJJuslH7nXgcJp56FGCSk",{"id":771,"title":772,"author":344,"body":773,"category":780,"cover":781,"date":344,"description":503,"extension":346,"featured":368,"meta":782,"navigation":348,"path":784,"readingTime":785,"seo":786,"slug":787,"stem":788,"__hash__":789},"summary\u002Fstories\u002Fsummary\u002Fthe-photograph.md","The Photograph",{"type":8,"value":774,"toc":778},[775],[11,776,777],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":61,"searchDepth":342,"depth":342,"links":779},[],"Mystery","\u002Fstories\u002Fthe_photograph.jpg",{"download":783},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":772,"description":503},"the-photograph","stories\u002Fsummary\u002Fthe-photograph","IEnH0I_cZghp4EPWQrgQ-JfzXfka2_vi8aLS_Wq7dW0",{"id":791,"title":792,"author":344,"body":793,"category":344,"cover":800,"date":344,"description":503,"extension":346,"featured":368,"meta":801,"navigation":348,"path":802,"readingTime":344,"seo":803,"slug":804,"stem":805,"__hash__":806},"summary\u002Fstories\u002Fsummary\u002Fy2121.md","Y2121",{"type":8,"value":794,"toc":798},[795],[11,796,797],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":61,"searchDepth":342,"depth":342,"links":799},[],"\u002Fstories\u002Fy2121.jpg",{},"\u002Fstories\u002Fy2121",{"title":792,"description":503},"y2121","stories\u002Fsummary\u002Fy2121","oYNJ1nQ9wfVtso56wwe0407drPK5HPqcXwzjtIgwf8k",{"id":808,"title":809,"author":344,"body":810,"category":344,"cover":817,"date":344,"description":503,"extension":346,"featured":368,"meta":818,"navigation":348,"path":820,"readingTime":344,"seo":821,"slug":822,"stem":823,"__hash__":824},"summary\u002Fstories\u002Fsummary\u002Fyou.md","You",{"type":8,"value":811,"toc":815},[812],[11,813,814],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":61,"searchDepth":342,"depth":342,"links":816},[],"\u002Fstories\u002Fyou.jpg",{"download":819},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":809,"description":503},"you","stories\u002Fsummary\u002Fyou","vT4vFxGbe8v-FZUVRlttiCvehpZ_9gyy0bVoU2k-efs",1793522084523]